Friday, 4 March 2016

ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !

cab.jpg


ಓಲಾ’ ಕ್ಯಾಬ್ ಸೇವಾ ಸಂಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ನಗರದಲ್ಲಿ ‘ಬೈಕ್ ಟ್ಯಾಕ್ಸಿ’ ಸೇವೆಯನ್ನು ಆರಂಭಿಸಿದೆ.
ಬೆಂಗಳೂರಿನಲ್ಲಿ ಮಾರ್ಚ್ 2 ರಿಂದ ಈ ಸೇವೆಯನ್ನು ಅರಂಭಿಸಲಾಗಿದೆ. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಉಳಿದ ನಗರಗಳು, ರಾಜ್ಯಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುವುದು
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಪ್ರಣಯ್, ‘ಪ್ರತಿ ಕಿ.ಮೀ ಗೆ ರೂ.2 ದರ ನಿಗದಿಪಡಿಸಲಾಗಿದೆ. ಓಲಾ ಆಪ್ ಮೂಲಕ ಬೈಕ್ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ
ಓಲಾ ಕ್ಯಾಬ್‌ಗಳಲ್ಲಿ ಇರುವಂತೆ ಬೈಕ್ ಟ್ಯಾಕ್ಸಿಯಲ್ಲಿಯೂ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಮಾಡಿರುವುದರಿಂದ ಸಂಸ್ಥೆಯ ವತಿಯಿಂದ ಹೆಲ್ಮೆಟ್‌ ಒದಗಿಸಲಾಗುವುದೆಂದು ಹೇಳಿದರು.

ಓಲಾ ಆಪ್ ನಿಂದ ಬುಕ್ ಮಾಡಬಹುದು.. ಸದ್ಯಕ್ಕೆ ಬೈಕ್ ಟ್ಯಾಕ್ಸಿ ಫೇರ್ ಹೀಗಿದೆ.
ಓಲಾ ಬೈಕ್ ಟ್ಯಾಕ್ಸಿ ದರ : ಕನಿಷ್ಠ ದರ 30 ರೂ., ಪ್ರತಿ ಕಿ.ಮೀ.ಗೆ 2 ರೂ., ಬೈಕ್ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ.
ಊಬರ್‌ನಿಂದಲೂ ಬೈಕ್ ಟ್ಯಾಕ್ಸಿ ಸೇವೆ : ಊಬರ್ ಸಹ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಮಾಡಿದೆ. ಕನಿಷ್ಠ ದರ 15 ರೂ. ಪ್ರತಿ ಕಿ.ಮೀ.ಗೆ 3ರೂ. ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ

No comments:

Post a Comment